News & Events
ದತ್ತಿ ಉಪನ್ಯಾಸ ಕಾರ್ಯಕ್ರಮ
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಶೃಂಗೇರಿ ಹಾಗೂ ಡಾ. ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯ ಶೃಂಗೇರಿ ಇವರ ಸಹಯೋಗದಲ್ಲಿ ದಿ. ಶ್ರೀಮತಿ ಅನುಸೂಯ.ಹೆಚ್. ಕೆ ಇವರ ಸ್ಮರಣಾರ್ಥ "ದತ್ತಿ ಉಪನ್ಯಾಸ" ಕಾರ್ಯಕ್ರಮವು ಶ್ರೀ ಆದಿಚುಂಚನಗಿರಿ ಶಾಖಾ ಮಠ ಶೃಂಗೇರಿಯಲ್ಲಿ ನೆರವೇರಿತು. ಈ ಕಾರ್ಯಕ್ರಮ ದ ದಿವ್ಯಸಾನಿದ್ಯವನ್ನು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್. ರಿ.ಪ್ರಧಾನಕಾರ್ಯದರ್ಶಿಗಳಾದ ಪರಮಪೂಜ್ಯ ಶ್ರೀ ಶ್ರೀ ಪುರುಷೋತಮನಾಥ ಮಹಾಸ್ವಾಮೀಜಿ ಶ್ರೀ ಕ್ಷೇತ್ರ ಆದಿಚುಂಚನಗಿರಿ. ಆಶೀರ್ವಚನ ನೀಡಿದರು. ಶೃಂಗೇರಿ ಶಾಖೆಯ ಪೂಜ್ಯ ಶ್ರೀ ಶ್ರೀ ಗುಣನಾಥ ಸ್ವಾಮೀಜಿ ಯವರು ಪಾವನ ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮ ದಲ್ಲಿ ಪ್ರಗತಿ ಪರ ಕೃಷಿಕರಾದ ಕಾಫಿ ತೋಟ ಶ್ರೀ ಮಲ್ಲಪ್ಪ ಹೆಗ್ಗಡೆಯವರು, ಪ್ರಾಂಶುಪಾಲರಾದ ಡಾ. ಕೆ. ಸಿ. ನಾಗೇಶ್ ರವರು, ದಿವಂಗತ ಶ್ರೀಮತಿ ಅನುಸೂಯ. ಹೆಚ್. ಕೆ. ಕುಟುಂಬ ವರ್ಗದವರು, ಬಿ. ಇ. ಡಿ ಕಾಲೇಜಿನ ಉಪನ್ಯಾಸಕರು,ಪ್ರಶಿಕ್ಷಣಾರ್ಥಿ ಗಳು ಉಪಸ್ಥಿತರಿದ್ದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೀರ್ಥಹಳ್ಳಿಯ ಉಪನ್ಯಾಸಕರಾದ ಶ್ರೀ ಗಣಪತಿ. ಹೆಚ್. ಎ. ರವರು "ಶ್ರೀ ಕುವೆಂಪು ಕೃಷಿಯಲ್ಲಿ ಕೃಷಿಜನ್ಯ ಮಲೆನಾಡು "ಎಂಬ ವಿಷಯದ ಬಗ್ಗೆ ದತ್ತಿ ಉಪನ್ಯಾಸ ನೀಡಿದರು.
Freshers Day & Student Union Program
ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ||ಬಾಲಗಂಗಾಧರನಾಥ ಮಹಾಗುರುಗಳ ಸುವರ್ಣ ಪಟ್ಟಾಭಿಷೇಕ..... ಶ್ರೀ ಮಠದ ಸದ್ಭಕ್ತರಿಂದ ಸಮರ್ಪಿತವಾದ ಶ್ರೀ ಗುರುಪಾದಕ್ಕೆ 108 ಸ್ವರ್ಣ ಪುಷ್ಪಾರ್ಚನೆ...... ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‍ನ ಸುವರ್ಣ ಸಂಭ್ರಮ..... ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಗಳವರ ಪಟ್ಟಾಭಿಷೇಕ ದಶಮಾನೋತ್ಸವ ..... ಗುರುವಂದನಾ ಕಾರ್ಯಕ್ರಮ
Team
Taluk Level PU Colleges Sports
Krishna Janmastami
Career Guidance after 12th, Orientation for PU Science Students
Orientation for SSLC students of BGS Chikmagluru District
ಪರಮಪೂಜ್ಯ ಜಗದ್ಗುರು ಯುಗಯೋಗಿ, ಕಾಯಕಶಿಲ್ಪಿ, ಪದ್ಮಭೂಷಣ ಡಾ|| ಬಾಲಗಂಗಾಧರನಾಥ ಮಹಾಗುರುವಿನ 10ನೇ ವರ್ಷದ ಆರಾಧನೆ ಮತ್ತು ಸಂಸ್ಮರಣಾ ಮಹೋತ್ಸವವನ್ನು ಶೃಂಗೇರಿ ಶಾಖಾಮಠದಲ್ಲಿ ಸ್ಥಾಪಿತವಾಗಿರುವ ಬಿ.ಜಿ.ಎಸ್ ಬೃಂದಾವನದಲ್ಲಿ ಶ್ರೀ ಮಠದ ಸದ್ಭಕ್ತರೆಲ್ಲರ ಸಮ್ಮುಖದಲ್ಲಿ ವಿಜ್ರಂಭಣೆಯಿಂದ ನೆರವೇರಿಸಲಾಯಿತು. ಈ ಸುಸಂದರ್ಭದಲ್ಲಿ ಶ್ರೀ ಶ್ರೀ ಗುಣನಾಥ ಸ್ವಾಮೀಜಿಯವರ “ಚುಟುಕು ಚಾವಡಿ” ಪುಸ್ತಕ ಬಿಡುಗಡೆ ಮತ್ತು ವಿಧ್ಯಾರ್ಥಿಗಳಿಂದ ಸಂಕ್ರಾಂತಿ ಸುಗ್ಗಿ ಕುಣಿತ ಆಯೋಜಿಸಲಾಗಿತ್ತು .
ಬಿ ಜಿ ಎಸ್ ದರ್ಶಿನಿ ಶಾಲೆಯಲ್ಲಿ 2021-22 ನೇ ಸಾಲಿನ SSLC ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರನ್ನು ಪೂಜ್ಯ ಸ್ವಾಮೀಜಿಯವರು ಹಾಗೂ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿ ವರ್ಗದವರು ಸನ್ಮಾನಿಸಿ ಅಭಿನಂದಿಸಿದರು.
CCA Activities
BGS Birth anniversary (Akshara Santa Dina)
ದಿನಾಂಕ: 18 : 01 : 2022 ರಂದು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಶೃಂಗೇರಿ ಯಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ|| ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 77 ನೇ ಜಯಂತ್ಯೋತ್ಸವ ದಿನವನ್ನು ‘ಅಕ್ಷರ ಸಂತ’ ದಿನವನ್ನಾಗಿ ಆಚರಿಸಲಾಯಿತು.
Kuvempu Birth Anniversary Program
ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ) ಶೃಂಗೇರಿ. ಯಲ್ಲಿ ಜಗದಕವಿ,ಯುಗದಕವಿ,ರಾಷ್ಟ್ರ ಕವಿ ಡಾ.ಕುವೆಂಪು ರವರ ೧೧೭ ನೇ ಜನ್ಮದಿನೋತ್ಸವ ಆಚರಣಾಕಾರ್ಯಕ್ರಮವನ್ನು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಗಳ ದಿವ್ಯಸಾನಿದ್ಯದಲ್ಲಿ ಆಚರಿಸಲಾಯಿತು ಈ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ) ನ ಪ್ರಧಾನ ಕಾರ್ಯದರ್ಶಿಗಳಾದ ಪರಮಪೂಜ್ಯ ಶ್ರೀ ಶ್ರೀ ಪುರುಷೋತ್ತಮನಂದನಾಥ ಮಹಾಸ್ವಾಮೀಜಿ,ಹಾಸನ ಶಾಖೆಯ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಶಂಭುನಾಥಸ್ವಾಮೀಜಿ,ಚಿಕ್ಕಮಗಳೂರು ಶಾಖೆಯ ಪೂಜ್ಯ ಶ್ರೀ ಶ್ರೀ ಗುಣನಾಥಸ್ವಾಮೀಜಿಗಳು, ಶೃಂಗೇರಿ ಕ್ಷೇತ್ರದ ಶಾಸಕರಾದ ಶ್ರೀ ಟಿ.ಡಿ ರಾಜೇಗೌಡರು ಉಪಸ್ಥಿತರಿದ್ದರು.
ರಾಜ್ಯಮಟ್ಟದ ಎರಡು ದಿನಗಳ ವಿಜ್ಞಾನ ಶಿಕ್ಷಕರಗಳ ಕಾರ್ಯಗಾರ ದಿನಾಂಕ: 19.03.2021 & 20.03.2021
ಬಿ.ಜಿ.ಎಸ್. ಜ್ಞಾನ ವಿಜ್ಞಾನ ಅಧ್ಯಯನ ಕೇಂದ್ರ ಶೃಂಗೇರಿಯ ಸಹಯೋಗದೊಂದಿಗೆ ನಡೆಯುತ್ತಿರುವ ವಿಜ್ಞಾನ ಕಾರ್ಯಗಾರ: 19-03-2021 ಮತ್ತು 20-03-2021.
ಶ್ರೀ ಬಿಜಿಎಸ್ ಪದವಿಪೂರ್ವ ಕಾಲೇಜು ಬಾಳೆಹೊನ್ನೂರು-577112
ನರಸಿಂಹರಾಜಪುರ ತಾಲ್ಲೂಕು ಮಟ್ಟದ ಕ್ರಿಡಕೂಟದಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟದ ಕ್ರಿಡಕೂಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳು
ಶ್ರೀ ಬಿಜಿಎಸ್ ಪದವಿಪೂರ್ವ ಕಾಲೇಜು ಹಾಗೂ ಬಿಜಿಎಸ್ ದರ್ಶಿನಿ ಸಂಯುಕ್ತ ಪ್ರೌಢಶಾಲೆ, ಶೃಂಗೇರಿ-577139
ಶೃಂಗೇರಿ ತಾಲ್ಲೂಕು ಮಟ್ಟದ ಕ್ರಿಡಕೂಟದಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟದ ಕ್ರಿಡಕೂಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳು
ಶ್ರೀ ಬಿಜಿಎಸ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜು ಶೃಂಗೇರಿ
ಪದವಿಪೂರ್ವ ಕಾಲೇಜುಗಳ ತಾಲ್ಲೂಕುಮಟ್ಟದ ಕ್ರೀಡಾಕೂಟವೂ, ಶ್ರೀ ಬಿಜಿಎಸ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜು ಅಶ್ರಯದಲ್ಲಿ ನಡೆಯಿತು. ಪರಮಪೂಜ್ಯ ಶ್ರೀ ಶ್ರೀ ಗುಣನಾಥಸ್ವಾಮೀಜಿಯವರು ಕ್ರೀಡಾಪಟುಗಳಿಗೆ ಆಶೀರ್ವಚನ ನೀಡಿ ಆಶೀರ್ವದಿಸಿದರು.--
ಶ್ರೀ ಬಿಜಿಎಸ್ ಸಂಗೀತ ಕಲೆ ನಾಟಕ ಮತ್ತು ನೃತ್ಯ ತರಭೇತಿ ಶಾಲೆ ಹಾಗೂ
ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ|| ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಸಾಹಿತ್ಯ ಅಧ್ಯಯನ ಕೇಂದ್ರ ಉದ್ಘಾಟನ ಕಾರ್ಯಕ್ರಮ